Saturday, May 6, 2017

ದುಡ್ಡು ಉಳಿಸುವುದು ಹೇಗೆ ? ೬ ಪ್ರಯೋಗಕಾರಿ ಸಲಹೆಗಳು



ನಾವೆಲ್ಲರೂ ದಿನಾಲೂ ದುಂದುವೆಚ್ಚ ಮಾಡ್ತಿರ್ತೀವಿ , ಅದರ ಜೊತೆಗೆ ನಮೆಗೆಲ್ಲ ದುಡ್ಡುಉಳಿಸಬೇಕು ಅಂತ ಅನ್ನಿಸುತ್ತಿರುತ್ತದೆ . ಆದೆರೆ ಏನಾದ್ರು ಮಾಡಿ ನಾವು ನಮ್ಮ ಹತ್ತಿರ ಇರುವ ಹಣವನ್ನ ಖರ್ಚು ಮಾಡಿ ಬಿಡ್ತಿವಿ. ಮಂತ್ ಎಂಡ್ ಅಲ್ಲಿ ಬ್ಯಾಂಕ್ ಅಕೌಂಟ್ ಅಲ್ಲಿ ೧೦೦-೫೦೦ ರೂ ಉಳಿದಿರುತ್ತದೆ. ಮತ್ತೆ ಮುಂದಿನ ತಿಂಗಳು ಉಳಿಸೋಣ ಅನ್ಕೊಂಡು ಸುಮ್ಮನಾಗ್ತಿವಿ. ನಾವು ದುಡ್ಡು ಉಳಿಸೋಕೆ ಏನೇ ಪ್ರಯತ್ನ ಮಾಡಿದ್ರು ನಾವು ಉಲಿಸ್ಕ್ ಆಗ್ತಿರೋಲ್ಲ. ಹಾಗಾದ್ರೆ ಬನ್ನಿ ದುಡ್ಡು ಹೇಗ್ ಉಳಿಸೋದು ಅನ್ನೋದನ್ನ ತಿಳಿಯೋಣ.


) ಸೇವಿಂಗ್ಸ್ ಅಕೌಂಟ್
ಮೊದಲು ನಾವೆಲ್ಲ ಮಾಡಬೇಕಾದ ಕೆಲಸ , ನಮಗೆಲ್ಲ salary ಅಕೌಂಟ್ ಇರುತ್ತೆ, ಅದರ ಜೊತೆಗೆ ಇನ್ನೊಂದು ಅಕೌಂಟ್ ಮಾಡಿಸಬೇಕು. ಸೇವಿಂಗ್ಸ್ ಅಕೌಂಟ್ ಮಾಡಿಸ್ಕೊಂಡು ಸ್ಯಾಲರಿ ಬಂದ ತಕ್ಷಣ ಆದಷ್ಟು ಹಣ ಆ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿ ಬಿಡ್ಬೇಕು. ೨೦,೦೦೦ ಸ್ಯಾಲರಿ ಇದ್ದಾರೆ ೫೦೦೦ ಆದ್ರೂ ಟ್ರಾನ್ಸ್ಫರ್ ಮಾಡಿ. ಉಳಿದ ಹಣದಲ್ಲಿ ಮಂತ್ ನಿಭಾಯಿಸೋಕೆ ಟ್ರೈ ಮಾಡಬೇಕು. ಮೊದಲು ಉಳಿಸಿ ಆಮೇಲೆ ನಮ್ಮ ಖರ್ಚು ಮಾಡಬೇಕು.ಕೆಲವು ಬ್ಯಾಂಕ್ ಒಳ್ಳೆಯ ಬಡ್ಡಿ ಕೂಡ ಕೊಡ್ತಾರೆ.

) ಮೊದಲು ಉಳಿಸಿ ಆಮೇಲೆ ಖರ್ಚು ಮಾಡಿ
ನಾವು ಆಮೇಲೆ ಹೇಗೆ ದುಡ್ಡು ಖರ್ಚು ಮಾಡ್ತೀವಿ ಅಂತ ತಿಳ್ಕೊಬೇಕು ಆಮೇಲೆ ನಮಗೆ ಎಲ್ಲಿ ಅದನ್ನ ತಡೀಬೇಕು ಅಂತ ಗೊತ್ತಾಗುತ್ತೆ. ಈವಾಗ ನಾವು ದಿನಾಲೂ ಆಫೀಸ್ ಗೆ ಹೋಗ್ಬೇಕಾದ್ರೆ ತಿಂಡಿ ತಿನ್ಕೊಂಡು ಹೋಗ್ತಿವಿ. ಅದನ್ನ ಆದಷ್ಟು ಮನೇಲಿ ಮಾಡಬೇಕು.




) ಆನ್ಲೈನ್ ಶಾಪಿಂಗ್ ಬೇಡ
ಆನ್ಲೈನ್ ಅಲ್ಲಿ ಅದು ಇದು ಆಫರ್ಸ್ ಬರ್ತಿರುತ್ತೆ. ನಾವು ಅದಕ್ಕೆ ಗಮನ ಕೊಡ್ಬಾರ್ದು. ೧೦% ೧೫ % ಡಿಸ್ಕೌಂಟ್ ಇರುತ್ತೆ ಅಂತ purchase ಮಾಡಿದ್ರೆ ಅವಾಗ ನಮ್ಮ ಹಣ ದುಂದು ವೆಚ್ಚ ಆಗುತ್ತೆ. ನಮಗೆ ಯಾವಾಗ ಅವಶ್ಯಕತೆ ಇದೆ ಆವಾಗ್ಲೇ ನಾವು purchase ಮಾಡಬೇಕು.



) ಶಾಪಿಂಗ್ ಗಿಂತ ಮುಂಚೆ
ಶಾಪಿಂಗ್ ಹೋಗೋ ಮುಂಚೆ ಒಂದು ಲಿಸ್ಟ್ ಮಾಡ್ಕೊಂಡು ಹೋಗಿ. ಅದು ನಮ್ಮ ಬಜೆಟ್ ಗೆ ಸರಿ ಹೋಗೋತರ ಇರ್ಬೇಕು. ಶಾಪಿಂಗ್ ಮಾಡ್ಬೇಕಾದ್ರೆ ಅಷ್ಟೇ ತರ್ಬೇಕು. ಅದಕ್ಕಿಂಗ್ ಜಾಸ್ತಿ ಟ್ಯಾರೊ ಯೋಚನೆ ಮಾಡ್ಬೇಡಿ.



) ಪಾರ್ಟಿ ಮನೇಲಿ ಕೊಡಿ
ಪಾರ್ಟಿ ಹೊರಗಡೆ ಮಾಡೋದ್ರಿಂದ ಜಾಸ್ತಿ ಹಣ ಖರ್ಚು ಆಗುತ್ತೆ. ನಿಮ್ಮ ಸ್ನೇಹಿತರನ್ನು ಮನೆಗೆ ಕರೆದು ಪಾರ್ಟಿ ಕೊಡಿ. ಇದರಿಂದ ಜಾಸ್ತಿ ಹಣ ಉಳಿಯುತ್ತದೆ.


) ಮೋಜು ಮಸ್ತಿಗೆ ಜಾಸ್ತಿ ದುಡ್ಡು ಖರ್ಚು ಮಾಡೋದು ತಡೆಯಿರಿ
ಮೂವಿ, ಎಂಟರ್ಟೈನ್ಮೆಂಟ್,ಕ್ರಿಕೆಟ್, ಶೋ, ಗಳಿಗೆ ಹೋಗಿ ಹಣ ಖರ್ಚು ಮಾಡೋದು ಬೇಡ. ಆದಷ್ಟು ಅದರಿಂದ ದೂರ ಇರ್ಬೇಕು. ಮನೇಲಿ ಪುಸ್ತಕ ಓದುವುದರ ಹವ್ಯಾಸ ಬೆಳೆಸಿಕೊಳ್ಳಿ. ಇದು ಒಂದು ಒಳ್ಳೆ ಅಭ್ಯಾಸ.



ಇನ್ನು ಬೇಕಾದಷ್ಟು ದಾರಿ ಇದೆ ದುಡ್ಡು ಉಳಿಸಲು ಆದ್ರೆ ನಾವು ಮನಸು ಮಾಡಬೇಕು. ಮೊದಲು ಈ ೬ ದಾರಿ ಹಿಂಬಾಲಿಸಿ. ನಿಮಗೆ ದುಡ್ಡು ಉಳಿಸೋಕೆ ಸಹಾಯ ಆದ್ರೆ ನಂಗೊಂದು ಕಾಮೆಂಟ್ ಮಾಡಿ ತಿಳಿಸಿ

No comments:

Post a Comment

click here

Contact

Sachin kokane
9844495929
sachinkk24@gmail.com

Header Ads