ದಕ್ಷಿಣ
ಭಾರತ ರಾಜ್ಯಗಳ ಮೇಲೆ ಹಿಂದಿ
ಹೇರಿಕೆ !
ಇತ್ತೀಚಿನ
ದಿನಗಳಲ್ಲಿ ನಾವು ನೋಡ್ತಾನೆ
ಇದೀವಿ , ಉತ್ತರ
ಭಾರತದ ಬಿ ಜೆ ಪಿ ಸರಕಾರ ಹಿಂದಿ
ಹೇರಿಕೆ ಮಾಡ್ತಾ ಇದಾರೆ ಅಂತ ಜನ
ಸಾಮಾಜಿಕ ಜಾಲತಾಣಗಳಲ್ಲಿ
ಹೇಳ್ಲಗುತ್ತಿದೆ . ಮೊದಲು
NH ( ರಾಷ್ಟ್ರೀಯ
ಹೆದ್ದಾರಿಗಳ ಮೇಲೆ ) ಮೈಲಿ
ಗಲ್ಲುಗಳ ಮೇಲೆ ಹಿಂದಿ ಬರೆಯುವಂತೆ
ಆದೇಶ ಹೊರಡಿಸಿದ್ರು.
ಕರ್ನಾಟಕದ ರಾಷ್ಟ್ರೀಯ
ಹೆದ್ದಾರಿ ಯಲ್ಲಿ ಮೈಲಿಗಲ್ಲು
ಮೇಲೆ ಹಿಂದಿ ಮತ್ತು ಇಂಗ್ಲಿಷ್
ಬರೆಯಲಾಯಿತು. ಕನ್ನಡ
ಅಳೆಸಿ ಹಿಂದಿ ಬರೆದಿದ್ದು
ಕನ್ನಡಿಗರಿಗೆ ಇಷ್ಟ ಆಗ್ಲೇ ಇಲ್ಲ.
ಅಷ್ಟೇ ಯಾಕೆ ತಮಿಳು
ಮಲಯಾಳಂ ಅಂದ್ರ ಜನರಿಗೂ ಕೂಡ ಇದು
ನಮ್ಮ ಮೇಲೆ ಹೇರಿಕೆ ಆಗುತ್ತಿದೆ
ಅಂತ ತಿರಸ್ಕರಿಸಿದ್ರು.
ಹಿಂದಿ
ಏನು ರಾಷ್ಟ್ರ ಭಾಷೆ ಅಲ್ಲ,
ನಾವೂ ಯಾಕೆ ಅದನ್ನು
ಕಲಿಬೇಕು, ನಮಗೆ
ನಮ್ಮ ರಾಜ್ಯದಲ್ಲಿ ನಮ್ಮ ಭಾಷೆ
ಇರಲಿ ಅಂತ ಜನ ಅಭಿಯಾನ ಶುರು
ಮಾಡಿದ್ರು. ನಮ್ಮ
ಜನರು ಕನ್ನಡ ಬಲ್ಲವರು ಹಿಂದಿ
ನಮಗೆ ಗೊತ್ತಿಲ್ಲ . ಇಲ್ಲಿನ
ಆಡಳಿತ ಭಾಷೆಯಲ್ಲಿ ಬರೆಯಲಿ,
ಅದರ ಜೊತೆಗೆ
ಇಂಗ್ಲಿಷ್ ಅಲ್ಲಿ ಬರೆಯಲಿ.
ಹಿಂದಿ ಬೇಡವೇ ಬೇಡ
ಎಂದು ವಾದ ಮಾಡಿದ್ರು. ಪಕ್ಕದ
ರಾಜ್ಯದ ಜನರು ಹಾಗೆ ಹಿಂದಿ ಬೇಡವೇ
ಬೇಡ , ನಾವ್ಯಾಕೆ
ಹಿಂದಿ ಕಲಿಬೇಕು ಅದರ ಅವಶ್ಯಕತೆ
ಇಲ್ಲ ಅಂತ ಹೇಳಿದ್ರು. ಇನ್ನು
ಕೆಲೆವೆಡೆ ಮೈಲಿಗಲ್ಲು ಮೇಲೆ
ಬರೆದ ಹಿಂದಿ ಅಳಿಸಿ ತಮ್ಮ ಭಾಷೆಯಲ್ಲಿ
ಬರೆಯಲಾಯಿತು.
ಆದರೆ
ರಾಜ್ಯ ಸರಕಾರ ಇದರ ಬಗ್ಗೆ ಮಾತನಾಡಲೇ
ಇಲ್ಲ, ಟ್ವಿಟ್ಟರ್
ಫೇಸ್ಬುಕ್ ಅಲ್ಲಿ ತಮ್ಮ ತಮ್ಮ
ಊರಿನಲ್ಲಿ ಹಿಂದಿ ಅಳೆಸಿ ತಮ್ಮ
ಭಾಷೆ ಬರೆದು ಫೋಟೋ ಕ್ಲಿಕ್ ಮಾಡಿ
ಹಾಕಿದ್ರು.
ಹಿಂದಿ
ಹೇರಿಕೆ ಇಲ್ಲಿಗೆ ನಿಲ್ಲಲಿಲ್ಲ,
ಬಿಜೆಪಿ ನಾಯಕರು
ಹಿಂದಿ ಕಡ್ಡಾಯವಾಗಿ ೧ ರಿಂದ ೮
ನೇ ತರಗತಿ ವರೆಗೆ ದೇಶದಾದ್ಯಂತ
ಶಾಲೆಗಳಲ್ಲಿ ಮಾಡಬೇಕು ಅಂತ ಮನವಿ
ಮಾಡಿಕೊಂಡ್ರು. ಬಿಜೆಪಿ
ನಾಯಕರು ಶ್ರೀ ಅಶ್ವಿನ್ ಕುಮಾರ್
ಉಪಾಧ್ಯಾಯ್ ಅವರು ಸಲ್ಲಿಸಿದ್
PIL ಗೆ ಸುಪ್ರಿಲ್
ಕೋರ್ಟ್ ಅಸ್ತು ಎಂದಿದೆ .
ಈವಾಗ ಎಲ್ಲ
ರಾಜ್ಯಗಳಲ್ಲೂ ಹಿಂದಿ ಕಡ್ಡಾಯ.
ಎಲ್ಲ ಮಕ್ಕಳಿಗೂ
ಕಲಿಸಲೇ ಬೇಕು. ಆರ್ಟಿಕಲ್
೩೪೩ ಯ ಪ್ರಕಾರ ಎಲ್ಲ ರಾಜ್ಯದಲ್ಲೂ
೧ ರಿಂದ ೮ ತರಗತಿ ವರೆಗೂ ಹಿಂದಿ
ಕಡ್ಡಾಯ.
ಆದರೆ
ಕನ್ನಡಿಗರ ವಾದ ನಾವು ಯಾಕೆ ಹಿಂದಿ
ಕಲಿಬೇಕು, ಅವರು
ನಮ್ಮ ದಕ್ಷಿಣ ಭಾರತದ ಭಾಷೆ ಕಲಿತಾರ
? ಕನ್ನಡ
ತೆಲುಗು ತಮಿಳ್ ಮಲಯಾಳಂ ಅವರಿಗೆ
ಬರುತ್ತಾ? ನಾವು
ಯಾಕೆ ನಮ್ಮ ಮಾತೃ ಬಿಟ್ಟು ಬೇರೆ
ಭಾಷೆ ಕಲಿಬೇಕು.? ಅಂತ
ವಾದ ಮಾಡಿದ್ರು. ಟ್ವೀಟ್
ಮಾಡಿದ್ರು.ಆದರೆ
ಇದಕ್ಕೆ ಸರಕಾರ ತಲೆ ಕೆಡಿಸಿಕೊಂಡಿಲ್ಲ,
ನಾವು ಏನ್ ಮಾಡೋದು
ನಮಗೆ ಗೊತ್ತು ಅನ್ನೋತರ ಅವರು
ಇದ್ದಾರೆ. ಹಿಂದಿ
ದೇಶದಲ್ಲಿ ಮುಖ್ಯ ಭಾಷೆ ಆಗ್ಲಿ
ಅದರಿಂದ ನಾವೆಲ್ಲ ಒಂದಾಗಿ ಬಾಳೋಕೆ
ಸರಳ ಅಂತ ಅವರ ಅನಿಸಿಕೆ.