Showing posts with label END OF TECHNOLOGY. Show all posts
Showing posts with label END OF TECHNOLOGY. Show all posts

Wednesday, May 3, 2017

ಟೆಕ್ನಾಲಜಿ ಅಂತ್ಯವಾದಾಗ !! ಏನೆಲ್ಲಾ ಆಗಬಹುದು ?

ಟೆಕ್ನಾಲಜಿ ಅಂತ್ಯವಾದಾಗ !! ಏನೆಲ್ಲಾ ಆಗಬಹುದು ?



ಬೆಳಿಗ್ಗೆ ಎದ್ದು ನಾನು ದಿನನಿತ್ಯದಂತೆ ಮೊಬೈಲ್ ನೋಡಿದೆ ಅದು ಆಫ್ ಆಗಿತ್ತು , ನಾನೆಲ್ಲೋ ಸ್ವಿಚ್ ಆಫ್ ಆಗಿರ್ಬೇಕು ಅಂತ ಚಾರ್ಜ್ ಹಾಕಿದೆ, ಕರೆಂಟ್ ಇರಲಿಲ್ಲ, ಏನಿವತ್ತು ಕರೆಂಟ್ ಇಲ್ವಾ ಅಂತ ನನ್ನ ಬ್ಯಾಗ್ ಒಳಗೆ ಇದ್ದ ಪವರ್ ಬ್ಯಾಂಕ್ ತಗೆದು ಡೇಟಾ ಕೇಬಲ್ ಇಂದ ಅದಕ್ಕೆ ಮೊಬೈಲ್ ಸ್ವಿಚ್ ಮಾಡಿದೆ. ಆದ್ರೂ ಅದು ಆಫ್ ಇತ್ತು, ನಿನ್ನೆ ಫುಲ್ ಚಾರ್ಜ್ ಇದ್ದ ಪವರ್ ಬ್ಯಾಂಕ್ ಇವತ್ತು ಹೇಗ್ ಆಫ್ ಆಯಿತು ಅನ್ನೋದು ನಂಗೆ ತೋಚಲೇ ಇಲ್ಲ. ನಾನು ಎದ್ದು ಲ್ಯಾಪ್ಟಾಪ್ ಆನ್ ಮಾಡಿದೆ ಅದು ಆನ್ ಆಗಲಿಲ್ಲ.ಏನ್ ಕರ್ಮಾ ಇದು ನೈಟ್ ಎಲ್ಲ ಚಾರ್ಜ್ ಗೆ ಹಾಕಿದ್ದೆ, ಆದ್ರೂ ಚಾರ್ಜ್ ಆಗಿಲ್ವ ಅನ್ಕೊಂಡು ಮುಚ್ಚಿಟ್ಟೆ . ಏನಾಗ್ತಿದೆ ಅಂತ ನೋಡೋಕೆ ಲ್ಯಾಂಡ್ ಲೈನ್ ತಗೊಂಡು ಕಾಲ್ ಮಾಡೋಕೆ ಹೋದೆ. ರಿಸೀವರ್ ಕಿವಿಗೆ ಹಿಡಿದ್ರೆ ಯಾವ್ ಶಬ್ದಾನು ಕೇಳಿಸಲೇ ಇಲ್ಲ.




ಏನೋ ಪ್ರಾಬ್ಲಮ್ ಇರ್ಬೇಕು ಅಂತ ಹೊರಗಡೆ ಬಂದು ನೋಡಿದೆ ಯಾರು ಇರಲಿಲ್ಲ. ಎಲ್ಲರು ಎಲ್ಲೋದ್ರು ಅನ್ಕೊಂಡು ಮನೇಲಿ ಹೋಗಿ ಬಾಗಿಲು ಹಾಕೊಂಡು ಸ್ನಾನ ಮಾಡಿ ಬಂದೆ. ಇನ್ನು ಕರೆಂಟ್ ಬಂದಿರ್ಲಿಲ್ಲ. ಪೇಪರ್ ಆದ್ರೂ ಬಂದಿದೆಯಾ ಅಂತ ನೋಡಿದ್ರೆ ಅದು ಬಂದಿತ್ತು.ಅದರಲ್ಲಿ ಕರೆಂಟ್ ವಿಷಯ ಯಾವುದು ಬರೆದಿರಲಿಲ್ಲ . ಏನೋ ಇರ್ಬೇಕು ಯಾರ್ನಾದ್ರು ಕೇಳೋಣ ಅಂತ ಪಕ್ಕದ ಮನೆಗೆ ಹೋಗಿ ಬೆಲ್ ಮಾಡಿದೆ. ಬೆಲ್ ರಿಂಗ್ ಆಗಲೇ ಇಲ್ಲ. ನಾನು ಮೊದಲು ತಿಂಡಿ ಆಮೇಲೆ ನೋಡಿದ್ರೆ ಆಯಿತು ಅಂತ ಅಲ್ಲಿಂದ ಬಂದೆ. ಸ್ವಲ್ಪ ದೂರ ಹೋದಮೇಲೆ ಜೇಬಿನಲ್ಲಿ ದುಡ್ಡಿಲ್ಲ ಎಂದು ಗೊತ್ತಾಯ್ತು. ಏಟಿಎಂ ಗೆ ಹೋಗಿ ದುಡ್ಡು ತಗೊಂಡ್ರೆ ಆಯಿತು ಅಂತ ಏಟಿಎಂ ಕಡೆಗೆ ಬಂದೆ. ಅಲ್ಲಿ ಏಟಿಎಂ ಔಟ್ ಆಪ್ ಸರ್ವಿಸ್ ಅಂತ ಬೋರ್ಡ್ ಇತ್ತು. ಎಲ್ಲರು ಏನು ತೋಚದಂತೆ ಒದ್ದಾಡ್ತಿದ್ರು. ಏನು ಅಂತ ಅಲ್ಲೇ ಕುತ್ ಒಬ್ಬನನ್ನು ವಿಚಾರಿಸಿದೆ. ಏನಾಗಿದೆ ಎಂದು? ಅವನು ಹೇಳಿದ: ಸರ್ ಎಲ್ಲೂ ಕರೆಂಟ್ ಇಲ್ಲಾ. ಏಟಿಎಂ, ಟಿವಿ, ರೇಡಿಯೋ,ಫೋನ್,ಏನು ವರ್ಕ್ ಆಗ್ತಿಲ್ಲ. ಜನರು ಏನ್ ಮಾಡೋದು ಅಂತ ತೋಚದೆ ಆಕಡೆ ಈಕಡೆ ಓಡಾಡ್ತಿದಾರೆ..



ನಂಗೆ ಹುಚ್ಚು ಹಿಡದ ಹಾಗೆ ಆಯಿತು.. ಇವಗೇನ್ ಮಾಡೋದು, ಬ್ಯಾಂಕ್ ಅಲ್ಲಿ ಹೋದ್ರೆ ಯಾವ್ ಕಂಪ್ಯೂಟರ್ ವರ್ಕ್ ಆಗಲ್ಲ... ಅವರು ದುಡ್ಡು ಕೊಡಲ್ಲ.. ಈವಾಗ ದುಡ್ಡು ಇಲ್ಲದೆ ಯಾರು ಏನು ಕೊಡಲ್ಲ.... ಎಲ್ಲ ಡೀಟೇಲ್ಸ್ ನಾವು ಡಿಜಿಟಲೈಜೆಷನ್ ಮಾಡಿ ಇಟ್ಟಿದೀವಿ. ಟೆಕ್ನಾಲಜಿ ಇಲ್ಲಾ ಅಂದ್ರೆ ಏನು ಮಾಡೋಕೆ ಆಗಲ್ಲ. ಇದರಿಂದ ಹೊರಗೆ ಬರೋಕೆ ಇನ್ನು ಕೆಲವು ವರುಷಗಳೇ ಬೇಕು..

ಎಲ್ಲಿ ಏನ್ ಆಯಿತು?ಯಾಕೆ ಹೀಗ್ ಆಯಿತು ಅಂತ ನೋಡೋಕೆ ಟಿವಿ ಇಲ್ಲ, ನ್ಯೂಸ್ ಏನು ಗೊತ್ತಾಗ್ತಗ್ಲಿಲ್ಲ. ಆದ್ರೆ ಹೇಗೋ ಕರೆಂಟ್ ಬಂತು. ಎಲ್ಲರು ಏಟಿಎಂ ಕಡೆಗೆ ಮನೆ ಕಡೆಗೆ ಬ್ಯಾಂಕ್ ಗೆ ಓಡಿ ಹೋದ್ರು . ಆದ್ರೆ ಅಲ್ಲಿ ಏಟಿಎಂ ವರ್ಕ್ ಆಗ್ಲೇ ಇಲ್ಲಾ, ಟಿವಿ ಆನ್ ಆಗ್ಲೇ ಇಲ್ಲಾ. ಯಾವುದೇ ಟೆಕ್ನಾಲಜಿ ಗ್ಯಾಜೆಟ್ ಇಲೆಕ್ಟ್ರಾನಿಕ್ ವಸ್ತು ಆನ್ ಆಗ್ಲೇ ಇಲ್ಲಾ.. ಏನು ಅಂತ ಯಾರಿಗೂ ಗೊತ್ತೇ ಆಗ್ತಿರ್ಲಿಲ್ಲ.




ಮುಂದಿನ ಭಾಗ್ ಶೀಘ್ರದಲ್ಲೇ ……………….

click here

Contact

Sachin kokane
9844495929
sachinkk24@gmail.com

Header Ads