Friday, April 21, 2017

ನಮಗ್ಯಾಕೆ ಬೇಕು ಕಂಬಳ ? ಏನಿದು ಕಂಬಳ?

        


   ಕಳೆದ ತಿಂಗಳಿಂದ ತುಂಬಾ ಜನರು ಕಂಬಳ ಬೇಕು ಅಂತ ಸಾಮಾಜಿಕ ಜಾಲತಾಣಗಳ್ಲಲಿ ಕೇಳುತ್ತಿದ್ದರೆ. ಹ್ಯಾಷ್ ಟ್ಯಾಗ್ # ಮೂಲಕ್ ಟ್ವಿಟ್ಟರ್ ಅಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ (#PassKambalaBill , #kambala #ISupportKambala ). ಅಂತೆಲ್ಲ ಬರೆದು ಸರಕಾರಕ್ಕೆ ತಮ್ಮ ಕೂಗು ಕೇಳುವತೆ ಟ್ರೆಂಡ್ ಮಾಡ್ತಿದಾರೆ.


ಯಾಕೆ ಕಂಬಳ ಬ್ಯಾನ್ ಮಾಡಿದ್ರು ?

೨೦೧೪ ರಲ್ಲಿ ಕೆಲವು ಪ್ರಾಣಿ ಕಲ್ಯಾಣ ಸಂಸ್ಥೆಗಳು ಸುಪ್ರೀಂ ಕೋರ್ಟ್ ಅಲ್ಲಿ ಬೇಡಿಕೆಯ್ ಇಟ್ಟಿದಕ್ಕೆ ಕಂಬಳ ಬ್ಯಾನ್ ಮಾಡಲಾಯಿತು. ಕಂಬಳ ಆಟದಿಂದ ಪ್ರಾಣಿ ಹಿಂಸೆ ಆಗ್ತಿದೆ, ಕೋಣಗಳನ್ನು ಓಡಿಸುವಾಗ ಹೊಡಿದು ಬಡಿದು ಹಿಂಸೆ ಮಾಡ್ತಿದಾರೆ ಅನ್ನೋದೇ ಅವರ ವಾದ ಆಗಿತ್ತು .

ಕಂಬಳ ಅಂದ್ರೆ ಏನು ?
ಮಂಗಳೂರಿನ ಜನಪ್ರಿಯವಾದ ಜಾನಪದ ಕ್ರೀಡೆ ಕಂಬಳ, ಕರಾವಳಿ ಭಾಗಗಳಲ್ಲಿ ಇದು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತದೆ. ಕೋಣವನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರೈತರು ಸ್ಪರ್ಧೆಯನ್ನು ಏರ್ಪಡಿಸುತ್ತಾರೆ . ಸಾಮಾನ್ಯವಾಗಿ ಕಂಬಳ ಡೆಪಾವಳಿ ಮುಗಿದನಂಥ ತಿಂಗಳು ಬೇರೆ ಬೇರೆ ಊರುಗಳಲ್ಲಿ ನಡಿಯುತಿತ್ತು.








ಕಂಬಳದ ವಿಶೇಷ ಏನಿದೆ ?
ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ. ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ಭಾಗದ ಕೆಲವು ಜನಪ್ರಿಯ ಕಂಬಳ ಸ್ಪರ್ಧೆಗಳೆಂದರೆ, ಮೂಡಬಿದರೆ ಮತ್ತು ಪುತ್ತೂರಿನಲ್ಲಿ ನಡೆಯುವ ಕೋಟಿ-ಚೆನ್ನಯ, ವೇಣೂರು, ಶಿರ್ವದಲ್ಲಿ ನಡೆಯುವ ಸೂರ್ಯ-ಚಂದ್ರ, ಮಿಯಾರಿನಲ್ಲಿ ನಡೆಯುವ ಲವ-ಕುಶ, ಉಪ್ಪಿನಂಗಡಿ ಭಾಗದಲ್ಲಿ ನಡೆಯುವ ವಿಜಯ-ವಿಕ್ರಮ, ಐಕಳದಲ್ಲಿ ನಡೆಯುವ ಕಾಂತಬಾರೆ-ಬೂದವಾರೆ ಕಂಬಳ ಸ್ಪರ್ಧೆಗಳು.
ಈವಾಗ ಯಾಕೆ ಮತ್ತೆ ಎಲ್ಲರು ಕಂಬಳ ಬೇಕು ಅಂತಿದಾರೆ ? ಸುಪ್ರೀಂ ಕೋರ್ಟ್ ಬ್ಯಾನ್ ಮಾಡಿ ೩ ವರ್ಷ ಆದ್ಮೇಲೆ .
ಮೇ ೨೦೧೪ ರಲ್ಲಿ ಸುಪ್ರೀಂ ಕೋರ್ಟ್ ತಮಿಳು ನಾಡಿನ ಜಲ್ಲಿಕಟ್ಟು ಬ್ಯಾನ್ ಮಾಡಿದ್ರು ಆವಾಗ್ಲೇ ನಮ್ಮ ಕಂಬಳ ಬ್ಯಾನ್ ಮಾಡಿದ್ರು . ಆದ್ರೆ ಜಾನ್ ೨೦೧೭ ರಂದು ತಮಿಳು ನಾಡಿನ ಜನರು ಜಲ್ಲಿಕಟ್ಟು ಬೇಕೇ ಬೇಕು ಅಂತ ಹೋರಾಟಕ್ಕೆ ಇಳಿದ್ರು . ಟ್ವಿಟ್ಟರ್ ಅಲ್ಲಿ ಫೇಸ್ಬುಕ್ ಅಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಇದು ಸುದ್ದಿ ಆಯಿತು . ಎಲ್ಲ ನ್ಯೂಸ್ ಚಾನೆಲ್ ಗಳಲ್ಲೂ ಪ್ರಮುಖ್ ಸುದ್ದಿ ಆಯಿತು. ತಮಿಳು ನಾಡಿನಿಂದ ಮೂಲೆ ಮೂಲೆ ಇಂದ ಜನ ಬಂದು ಧರಣಿಗೆ ಕುಂತರು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿಯೇ ಬಿಟ್ಟರು. ಯಾವ ಪೊಲೀಸ್ ಫೋರ್ಸ್ ಗು ಹೆದರಲಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಅಲ್ಲಿ ಬಂದು ಜಲ್ಲಿಕಟ್ಟು ಬೇಕೇ ಬೇಕು ಅಂತ ಕೂತರು . ೨೪ ಜನವರಿ ೨೦೧೭ ರಂದು ಸರಕಾರ ಜನಾಂಗ ಕೂಗು ಮತ್ತೆ ಹೋರಾಟ ನೋಡಲಾರದೆ ಬಿಲ್ ಪಾಸ್ ಮಾಡಿದ್ರು .
ಅದೇ ಸಮಯದಲ್ಲಿ ಕನ್ನಡಿಗರು ನಮಗೆ ಕಂಬಳ ಬೇಕು ಅಂತ ದ್ವನಿ ಎತ್ತಿದರು ಆದ್ರೆ ಯಾವುದೇ ಬೆಂಬಲ ಸಿಗದೇ ಅದು ಸ್ವಲ್ಪ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿತು. ಆದ್ರೂ ಸ್ವಲ್ಪ ಚಲನ ಚಿತ್ರ ನಾಯಕರ ಬೆಂಬಲದಿಂದ ಬೆಳಕಿಗೆ ಬಂತು. ರಾಜ್ಯ ಸರಕಾರ ಒತ್ತಡಕ್ಕೆ ಮಣಿದು ಬಿಲ್ ಪಾಸ್ ಮಾಡ್ತೀವಿ ಅಂತ ಹೇಳಿ ಸುಮ್ಮನಾಯಿತು.


ಆದರೆ ಇವತ್ತು (೧೯ ಏಪ್ರಿಲ್ ೨೦೧೭ ) ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬಳ ಬಿಲ್ ಪಾಸ್ ಮಾಡಿ ಅಂತ ಕೇಳಲಾಗುತ್ತಿದೆ . ಏವಾಗಲಾದ್ರು ಸರಕಾರ ಮತ್ತೆ ಜನರು ಕಣ್ಣು ತೆರೆದು ನೋಡಬೇಕಿದೆ.




Sachin kokane
@BelagaviKunda (twitter)



ಕಂಬಳದ ಬಗ್ಗೆ ಇನ್ನಷ್ಟು ಮಾಹಿತಿ




ಇಂದು ಆಧುನಿಕ ನಗರದಲ್ಲಿರುವ ಮನುಷ್ಯನಿಗೆ ಮನರಂಜನೆಗೇನೂ ಕೊರತೆಯಿಲ್ಲ. ಸಮಯ ಸಿಗದೆ ಇರುವುದು ಬೇರೆ ವಿಷಯವಾದರೂ ನಮಗೆ ಬೇಕೆಂದಾಗ ಮನರಂಜನೆ ಪಡೆಯುವಷ್ಟು ಸಾಕಷ್ಟು ಅನುಕೂಲತೆಗಳನ್ನು ನಗರಗಳಲ್ಲಿ ನಾವು ಇಂದು ಕಾಣಬಹುದಾಗಿದೆ. ಸಿನೆಮಾ ಮಂದಿರಗಳಾಗಲಿ, ಕ್ರೀಡೆಗಳಾಗಲಿ, ಮನರಂಜನಾ ಉದ್ಯಾನಗಳಾಗಲಿ, ಸಂಗೀತ ಕಚೇರಿಗಳಾಗಲಿ, ವಿವಿಧ ಕಾರ್ಯಕ್ರಮಗಳಾಗಲಿ ಎಲ್ಲವೂ ದೊರೆಯುತ್ತವೆ.

ಆದರೆ ಇದೇ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಅವಕಾಶಗಳಿರುವುದು ತುಸು ಕಷ್ಟವೆ. ರೈತಾಪಿ ವರ್ಗವು ನಮ್ಮಂತೆ ವಾರಕ್ಕೆ ಐದು ದಿನಗಳಂತಲ್ಲದೆ ಎಲ್ಲ ದಿನವೂ ಹೆಚ್ಚು ಕಡಿಮೆ ದಿನವಿಡಿ ದುಡಿಯಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಚಟುವಟಿಕೆಗಳು ಹಿಂದಿನ ಕಾಲದಿಂದಲೂ ರೂಪಗೊಂಡು ತಮ್ಮದೆ ಆದ ವೈಶಿಷ್ಟ್ಯತೆಗಳಿಂದ ಕೂಡಿದೆ. ಈ ರೀತಿಯ ಚಟುವಟಿಕೆಗಳು ಕೇವಲ ಮನರಂಜನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿಯೂ ಸಹ ಆಗಿರುವುದು ವಿಶೇಷ. ಅಂತಹ ಕೆಲ ಗ್ರಾಮೀಣ ಉತ್ಸವಗಳು, ಕ್ರೀಡೆಗಳು ಇಂದಿಗೂ ಕೂಡ ನಮ್ಮ ನಾಡಿನ ಕೆಲ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಇಂತಹ ಸಾಂಪ್ರದಾಯಿಕ ಉತ್ಸವಗಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಉಳಿಸಿಕೊಂಡು ಹೋಗ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಲೇಖನವು ಕರ್ನಾಟಕದ ಕರಾವಳಿ ಭಾಗದಲ್ಲಿ ಆಯೋಜಿಸಲ್ಪಡುವ ಕಂಬಳ ಜಾನಪದ ಕ್ರೀಡೆಯ ಕುರಿತು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಭಗವಂತನು ತಮ್ಮ ಜಾನುವಾರಗಳನ್ನು ರಕ್ಷಿಸುತ್ತಿರುವುದರ ಗೌರವಾರ್ಥವಾಗಿಯೂ ಈ ಕಂಬಳ ಉತ್ಸವವನ್ನು ಕೆಲ ಗ್ರಾಮಗಳಲ್ಲಿ ಆಚರಿಸಲಾಗುತ್ತದೆ.

ಭರ್ಜರಿ ಕಂಬಳ

ಸಾಮಾನ್ಯವಾಗಿ ಕಂಬಳವು ಬಿಡುವಾದ ಅಥವಾ ಖಾಲಿಬಿದ್ದ ಗದ್ದೆಗಳಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಇದಕ್ಕಾಗಿಯೇ ಪ್ರತ್ಯೇಕವಾದ ಕಣಗಳನ್ನು ನಿರ್ಮಿಸಲಾಗಿದೆ.
ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಈ ಜಾಗದಲ್ಲಿ ಮೇಲೆ ಮಾವಿನ ಎಲೆಗಳ ತೋರಣವನ್ನು ಕಟ್ಟಲಾಗಿರುತ್ತದೆ ಹಾಗೂ ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಮತ್ತೊಂದು ಇದೇ ರೀತಿಯ ಮಾವಿನ ತೋರಣವಿದ್ದು ಇದು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಗೆರೆಯ ಕೊಂಚ ಹಿಂದೆ ಏರಿಯೊಂದನ್ನು ನಿರ್ಮಿಸಲಾಗಿರುತ್ತದೆ. ಇದನ್ನು ಮಂಜೊಟ್ಟಿ ಎಂದು ಕರೆಯಲಾಗುತ್ತದೆ. ಪ್ರಾರಂಭದಿಂದ ವೇಗವಾಗಿ ಓಡಿಬರುವ ಕೋಣಗಳು ಈ ಮಂಜೊಟ್ಟಿಯನ್ನು ಏರುತ್ತ ವೇಗವನ್ನು ಕಳೆದುಕೊಂಡು ನಿಧಾನವಾಗಿ ನಿಲ್ಲುತ್ತವೆ.

ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ:

ಇಂದಿನ ಕಂಬಳಗಳಲ್ಲಿ ಕೋಣಗಳು ಮಂಜೊಟ್ಟಿಯನ್ನು ಏರಿದ ಮೇಲೆ ಅವುಗಳಿಗೆ ಹೊಡೆಯಬಾರದೆನ್ನುವ ನಿಯಮವೂ ಇದೆ.

ಕೋಣಗಳನ್ನು ವೇಗವಾಗಿ ಓಡಿಸುವ ಉದ್ದೇಶದಿಂದ ನಾಗರ ಬೆತ್ತಗಳಿಂದ ಅವುಗಳಿಗೆ ಹೊಡೆಯುವುದು ಸಾಮಾನ್ಯ. ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ ಹಾಗೂ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ಕೊನೆಗೊಂಡ ನಂತರ ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ ಎಂಬ ಯಜಮಾನರುಗಳ ಹೇಳಿಕೆಯು ಕಂಬಳವು ಇನ್ನು ಚಾಲ್ತಿಯಲ್ಲಿರುವುದಕ್ಕೆ ಕಾರಣವಾಗಿದೆ.

No comments:

Post a Comment

click here

Contact

Sachin kokane
9844495929
sachinkk24@gmail.com

Header Ads